'ಪದ್ಮಾವತಿ' ಚಿತ್ರದ ವಿರುದ್ಧ ಹೋರಾಟ, ಪ್ರತಿಭಟನೆ, ಬೆದರಿಕೆಯನ್ನ ಖಂಡಿಸಿ ಸ್ಯಾಂಡಲ್ ವುಡ್ ನಟಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಗಿಣಿ, ಪ್ರಿಯಾಮಣಿ, ಶ್ರದ್ಧಾ ಸೇರಿದಂತೆ ಹಲವು ಕಲಾವಿದರು ದೀಪಿಕಾ ವಿರುದ್ಧದ ಬೆದರಿಕೆಯನ್ನ ಖಂಡಿಸಿದ್ದಾರೆ. ಕೇವಲ ನಟಿಯರು ಮಾತ್ರವಲ್ಲ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪದ್ಮಾವತಿ' ವಿವಾದ ಹಿನ್ನೆಲೆ ಕರ್ನಾಟಕ ದೀಪಿಕಾ ಪಡುಕೋಣೆಯ ಪರವಾಗಿ ನಿಲ್ಲುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ''ಬಿಜೆಪಿಯ ಅಸಹಿಷ್ಣತೆ ಸಂಸ್ಕ್ರತಿಯನ್ನ ನಾನು ಖಂಡಿಸುತ್ತೇನೆ. ದೀಪಿಕಾ ಪಡುಕೋಣೆ ಪರವಾಗಿ ಕರ್ನಾಟಕ ನಿಲ್ಲುತ್ತೆ. ನಮ್ಮ ರಾಜ್ಯದ ಹೆಣ್ಣು ಮಗಳು. ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಜರುಗಿಸಿ ಎಂದು ಹರಿಯಾಣದ ಮುಖ್ಯಮಂತ್ರಿ ಅವರಿಗೆ ನಾನು ಒತ್ತಾಯಿಸುತ್ತೇನೆ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
C.M , D.K.S and sandalwood stars react to 'padmavati' issue by supporting the local girl deepika .